== ಎತ್ತು ನಾಲಿಗೆ (ಗೋಜಿಹ್ವ) == ಸಂ: ಗೋಜಿಹ್ವ ಹಿಂ: ಗಾರ್‍ಜವಾ ಗು: ಬೋಪಾಥರಿ ತೆ: ಎದ್ದು ನಾಲಿಕೆ ತ: ಎಲಂದ ಪಳಂ == ವರ್ಣನೆ == ಪುಟ್ಟಗಿಡ ಎಲೆಗಳು ಉದ್ದವಾಗಿ ಹಸಿರಾಗಿದ್ದು ಎಲೆಯ ಅಂಚು ಚಿತ್ರಾಕಾರವಾಗಿರುವುದು. ಹೂವು ಚಿನ್ನದ ಬಣ್ಣ ಹೊಂದಿದ್ದುದುಂಡಾಗಿರುತ್ತದೆ. ಎಲೆಗಳ ಮಧ್ಯದಲ್ಲಿ ಮೃದುವಾದ ರೋಮಗಳಿರುತ್ತವೆ. ಕಾಂಡದಿಂದ ಹೊರಟ ಹೂಗೊಂಚಲಿನ ತುದಿಯಲ್ಲಿಒಂದೆರಡು ಹೂಗಳು ಬಿಡುವುವು. ಹೂನಲ್ಲಿ ಸಾಮಾನ್ಯವಾಗಿ ಮೂರು ದಳಗಳಿದ್ದು ಪುಷ್ಪಪಾತ್ರೆ ಚಿಕ್ಕದಾಗಿರುವುದು. == ಸರಳ ಚಿಕಿತ್ಸೆಗಳು == === ಶೋಭೆಯಲ್ಲಿ === ಚೆನ್ನಾಗಿ ಶೋಧಿಸಿದ ಗೋಮೂತ್ರದಲ್ಲಿ 10 ಗ್ರಾಂ ಎಲೆ ಚೂರ್ಣವನ್ನು ಸೇರಿಸಿ ಸ್ವಲ್ಪ ಶುದ್ಧ ಜೇನುತುಪ್ಪದೊಡನೆ 1/4 ಟೀ ಚಮಚ ಸೇವಿಸುವುದು. ದಿವಸಕ್ಕೆ ಎರಡು ಬಾರಿ. === ದೀರ್ಘಕಾಲದಿಂದ ವಾಸಿಯಾಗದ ಹುಣ್ಣುಗಳಿಗೆ === ಎತ್ತುನಾಲಿಗೆ ಸಮೂಲವನ್ನು ಚೆನ್ನಾಗಿ ಜಜ್ಜಿ ಹುಣ್ಣುಗಳ ಮೇಲೆ ಕಟ್ಟುವುದು. ಹುಣ್ಣು ಆಳವಾಗಿದ್ದರೆ ಎತ್ತು ನಾಲಿಗೆ ಎಲೆಯನ್ನು ನಯವಾಗಿ ಅರೆದು ಹುಣ್ಣುಗಳಲ್ಲಿ ತುಂಬುವುದು. ಕೆಲವು ದಿವಸಗಳಲ್ಲಿ ಹುಣ್ಣುಗಳು ವಾಸಿಯಾಗುವುವು. === ಕಾಸ ಶ್ವಾಸ ಮತ್ತು ಕಫಕ್ಕೆ === 10 ಗ್ರಾಂ ಎತ್ತುನಾಲಿಗೆ ಸಮೂಲವನ್ನು ನುಣ್ಣಗೆ ಅರೆದು ನೀರಿನಲ್ಲಿ ಕದಡಿ ಸೇವಿಸುವುದು. ಹೀಗೆ ದಿವಸಕ್ಕೆರಡು ಬಾರಿ === ಅರುಚಿಗೆ === ಐದಾರು ಗ್ರಾಂ ಎತ್ತು ನಾಲಿಗೆ ಸಮೂಲವನ್ನು ನುಣ್ಣಗೆ ಅರೆದು ಸ್ವಲ್ಪ ಜೇನಿನೊಡನೆ ತೆಗೆದುಕೊಳ್ಳುವುದು. === ಮಲಬದ್ದತೆ ಮತ್ತು ರಕ್ತ ಶುದ್ಧಿಗಾಗಿ === 5 ಗ್ರಾಂ ಸಮೂಲವನ್ನು ನಯವಾಗಿಅರೆದು ಸ್ವಲ್ವ ಜೇನು ಸೇರಿಸಿ ಸೇವಿಸುವುದು. === ಹೃದಯದ ನಿಶ್ಯಕ್ತಿಯಲ್ಲಿ === 10 ಗ್ರಾಂ ಸಮೂಲ ಅಥವಾ 5 ಗ್ರಾಂ ಎತ್ತು ನಾಲಿಗೆಯ ಹೂವನ್ನು ತಂದು ನುಣ್ಣಗೆಅರೆದು ನೀರಿನಲ್ಲಿ ಕದಡಿ ಎರಡೆರಡು ಟೀ ಚಮಚ ಕುಡಿಯುವುದು. === ಕಣ್ಣಿಗೆ ಅಂಜನ === ಎತ್ತುನಾಲಿಗೆ ಸೊಪ್ಪಿನರಸ, ಕರಿ ಉಮ್ಮತ್ತಿನರಸ, ಇವನ್ನು ಸಮ ತೂಕ ಮಣ್ಣಿನ ಪಾತ್ರೆಯ ಒಳಭಾಗಕ್ಕೆ ಲೇಪಿಸುವುದು. ಆಕಳು ತುಪ್ಪದಲ್ಲಿ ಮಂದವಾಗಿ ಕಲಸಿ ಅಂಜನವಿಡುವುದು. ಸರ್ವ ನೇತ್ರವ್ಯಾಧಿಗಳು ವಾಸಿಯಾಗುವುವು. === ಎಚ್ಚರಿಕೆ === ವ್ಯಾಧಿಯಲ್ಲಿ ಪ್ರಮಾಣ ಮೀರಿ ಸೇವಿಸುವುದರಿಂದ ಅಹಿತಕರ ಪರಿಣಾಮಗಳಾಗಬಹುದು. ಇಂತಹ ಸಂದರ್ಭದಲ್ಲಿ ನೀರಿನಲ್ಲಿ ತೇದ ಶ್ರೀಗಂಧದ ಗಂಧವನ್ನು ನೆಕ್ಕಿಸುವುದು ಅಥವಾ ಗುಲಾಬಿ ಹೂದಳಗಳನ್ನು ಸಕ್ಕರೆಯೊಂದಿಗೆ ಸೇವಿಸುವುದು. == ಉಲ್ಲೇಖಗಳು == ಪುಸ್ತಕದ ಹೆಸರು: ಬಾಬಾ ಬುಡನ್ ಗಿರಿ ಮತ್ತು ಸಿದ್ದರ ಬೆಟ್ಟದ ಅಪೂರ್ವ ಗಿಡಮೂಲಿಕೆಗಳು ಹಾಗೂ ಸರಳ ಚಿಕಿತ್ಸೆಗಳು ಸಂಪಾದಕರು: ವೈದ್ಯ ಎ.ಆರ್.ಎಂ. ಸಾಹೇಬ್ ಪ್ರಕಾಶಕರು: ಮಠಾಧೀಶರು, ಸದ್ಗುರು ದಾದಾ ಹಯಾತ್ ಮೀರ್ ಖಲಂದರ್ ಪೀಠ, ಬಾಬಾಬುಡನ್ ಗಿರಿ, ಚಿಕ್ಕಮಗಳೂರು